ಕೀರ್ತನೆ - 1068     
 
ಇದೆ ದನುಜಮರ್ದನ ಚಕ್ರಹಸ್ತ – ಮ- ತ್ತಿದೆ ವೇದನುತ ಶಂಖಹಸ್ತ । ಇದೆ ಈರೇಳು ಜಗವನೊಲಿದಿಂಬಿಟ್ಟು ಮೆರೆವ ಹಸ್ತ | ಇದೆ ಇದೆ ವೈಕುಂಠವೆಂದು ತೋರುವ ಹಸ್ತ | ಇದೆ ಪುರದರವಿಠಲನಿದ್ದಿರವು ಮತ್ತಿದೆ | ತಿರುವೆಂಗಳಪ್ಪನ ಮೂರುತಿ ಇದೆ