ಕೀರ್ತನೆ - 1060     
 
ಕಣ್ಣಲಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ । ರಸ ನದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ । ಸ್ವರುಶದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ । ಶ್ರವಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ । ಪ್ರಾಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ । ಲೋಕ ವಿಲಕ್ಷಣ ದಿವ್ಯ ಕರಣ ಲೋಕಕೆ ಆಶ್ಚರ್ಯ ಪುರಂದರವಿಠಲ