ಕೀರ್ತನೆ - 1059     
 
ಅಣುವಾಗಬಲ್ಲ ಮಹತ್ತಾಗಬಲ್ಲ | ಅಣುಮಹತ್ತೆರಡೊಂದಾಗ ಬಲ್ಲ ರೂಪವಾಗಬಲ್ಲ ಅಪರೂಪವಾಗ ಬಲ್ಲ ರೂಪ-ಅಪರೂಪವೆರಡೊಂದಾಗಬಲ್ಲ | ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ ವ್ಯಕ್ತ ಅವ್ಯಕ್ತ ಎರಡೊಂದಾಗ ಬಲ್ಲ | ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ | ಸುಗುಣ ನಿರ್ಗುಣ ಎರಡೊಂದಾಗಬಲ್ಲ । ಅಘಟಿತ ಘಟಿತ ಅಚಿಂತ್ಯಾದ್ಭುತ ಮಹಿಮ । ಸ್ವಗತ ಭೇದವಿವರ್ಜಿತ ಪುರಂದರವಿಠಲ