ಕೀರ್ತನೆ - 1056     
 
ಉರಿಸಾಗರಗಳ ಸುರಿದು ನಾಲಗೆ ನೀಡೆ | ಚರಾಚರಂಗಳು ಚಾರಿವರಿವುತಲಿತ್ತು | ಬ್ರಹ್ಮಾಂಡವಂದೇ ಸಿಡಿದು ಹೋಗುತಿತ್ತು । ಬ್ರಹ್ಮಪ್ರಳಯವಂದೇ ಆಗಿಹೋಗುತಿತ್ತು | ಸಿರಿಮುದ್ದು ನರಸಿಂಹ ಪುರಂದರವಿಠಲ | ಪ್ರಹ್ಲಾದದೇವ ಬಂದು ನಿಲಿಸದಿದ್ದರೆ | ಬ್ರಹ್ಮಾಂಡವಂದೇ ಸಿಡಿದುಹೋಗುತಿತ್ತು