ಕೀರ್ತನೆ - 1054     
 
ಹಿರಣ್ಯಕಶಿಪುವಿನ ಉದರವ ಬಗಿದ ಬಳಿಕ | ಕರುಳುಮಾಲೆಯ ಕಿತ್ತು ಕೊರಳಲಿಕ್ಕಿದ ಬಳಿಕ | ಉರಿಯನುಗುಳಲೇತಕೆ ಸಿರಿಯ(ಸು)ನುಡಿಸಲೇತಕೆ । ಹರ-ಬೊಮ್ಮಾದಿಗಳನ್ನು ಸರಕುಮಾಡಲೇತಕೆ | ಸಿರಿಮುದ್ದು ನರಸಿಂಹ ಪುರಂದರವಿಠಲ ಪ್ರಹ್ಲಾದದೇವ ಬಂದರೆ ಕರೆದು ಮುದ್ದಾಡಲೇತಕೆ