ಕೀರ್ತನೆ - 1053     
 
ಅಂಜುವೆ ನಾನೀ ಸಿಂಹದ ಮೊಗದವ । ಹುಂಕರಿಸುವೆ ಮೊರಿದೊಮೊಮೊ । ಅಂಜುವೆ ನಾನೀ ಕೋಪಾಟೋಪದವ | ಗುಡಗುಡಿಸುವೆ ಮೊರೆದೊಮ್ಮೊಮ್ಮೊ | ಅಂಜುವೆ ನಾನೀ ಕಿವಿಯ ಮೇಳವಿಸಿ ಮೆಲ್ಕವಿದೆರಗುವೆ ಮೊರದೊಮ್ಮೊಮೊ । ಅಂಜುವೆ ನಾನೀ ಕುಡುದಾಡೆಗಳ | ಕಿಡಿ ಕಿಡಿ ಕಿಡಿಗೆದರಿಸುವೆ ಮೊರೆದೊಮ್ಮೊಮೊ । ಅಂಜುವೆ ನಾನೀ ತೆರವಾಯ ತರೆಯುತ ಗಹಗಹಿಸುವೆ ಮೊರೆದೊಮ್ಮೊಮ್ಮೊ | ಅಂಜುವೆ ನಾನೀ ಸಿರಿಮುದ್ದು ನರಸಿಂಹ ಪುರಂದರವಿಠಲ ನೀನು ಉರಿಮೋರೆ ದೈವವೆ ಅಂಜುವೆ