ಕೀರ್ತನೆ - 1047     
 
ಆಪಾದವಾನಂದ ಆನಖವಾನಂದ | ಆಜಾನು ಆಜಂಘ ಆನಂದಮಯಮಯ್ಯ । ಆ ಊರು ಆನಂದ ಆ ಕಟಿ ಆನಂದ | ಆನಾಭಿ ಆ ಕುಕ್ಷಿ ಆನಂದಮಯವಯ್ಯ | ಆ ಉರ ಆನಂದ ಆ ಭುಜವಾನಂದ | ಆ ಕಂಬುಗ್ರೀವ-ಮುಖ ಆನಂದಮಯವಯ್ಯ | ಆಶಿರೋರುಹಗಳು ಆನಂದಮಯವಯ್ಯ | ಅಸಂಖ್ಯ ಆನಮದ ಪುರಂದರವಿಠಲ