ಕೀರ್ತನೆ - 1043     
 
ವಾಸುದೇವ ಗರ್ಭವಾಸವ ಮಾಡಿದ ನೋಡಾ | ಹಾಸು ಮಂಚ ಶೇಷ, ಶ್ರೀಸತಿಯ ತೊಡೆಯಲ್ಲಿ | ಈಶನಿಗೆ ಗುರುವಾದನೀತ । ವಾಸವಾದಿಗಳು ಆಳುಗಳಯ್ಯ | ವಾಸುದೇವ ಗರ್ಭವಾಸವ ಮಾಡಿದ ನೋಡಾ । ಲೇಸು ಧಣಿ ಧಣಿ ಗೋರಂಟ್ಲ ಚಿನ್ನರಾಯ ಪುರಂದರವಿಠಲ