ಎನಗೊಬ್ಬ ಒಡೆಯ ದೊರಕಿದ ದೊರಕಿದ |
ಸಿದ್ಧಾಯವನೀವ ಕಟ್ಟಳೆ ಕಂದಾಯವನೀವ |
ಬೇಡಿದ ಉಚಿತವ ನಮಗವನೀವ ।
ಎನಗೊಬ್ಬ ಒಡೆಯ ದೊರಕಿದ ।
ಕಷ್ಟ ನಷ್ಟಗಳಿಲ್ಲ ಒದೆ-ಜಡಿತಗಳಿಲ್ಲ |
ಎನ್ನ ಮನಬಂದಂತೆ ಓಲೈಸುವೆನು |
ಎನ್ನಮನಬಂದಾಗ ಓಲೈಸಿಕೊಂಬ |
ಕೇಡಿಲ್ಲದೊಡೆಯ ಪುರಂದರವಿಠಲ
ಎನಗೊಬ್ಬ ಒಡೆಯ ದೊರಕಿದ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ