ಕೀರ್ತನೆ - 1037     
 
ಲೋಕದ ಮಾನವರೆಲ್ಲ ನಿರಾಕಾರನೆನೆಂದೆನಲು ನಮ ಗೇಕೊ ವಾದ ವಿವಾದ ಬರಿದೆ ಕಾಕರ ಕಣದೊಳಗೆ ಸಾಕಾರನನನರಿಯದ ಮೂಢಾಕಾರರ ಕೂಡೆ ನಮ ಗೇಕೊವಾದ ನಮಗಿದೇಕೊ ವಾದ | ಏಕೋ ವಿಷ್ಣುವೆಂಬ ಪುರಂದರವಿಠಲ ನೀನಿರಲು ನಮಗಿನ್ನೇಕೊ ವಾದ