ಕೀರ್ತನೆ - 1036     
 
ನಿಚ್ಚಮಂಗಳ (ನಿಚ್ಚ) ನಿಧಿನೀನೆಂದು । ಸಚ್ಚಿದಾನಂದ ಸ್ವರೂಪ ನೀನೆಂದು | ಅಚ್ಯುತಾನಂತ ಗೋವಿಂದ ನೀನೆಂದು | ಮೆಚ್ಚಿದೆ ನಾನಿನ್ನ ಚರಣವ ಇಂದು | ಅಚ್ಚ ಸಕಲ ಲೋಕಕ್ಕಧಿದೈವ ನೀನೆಂದು ಲಚ್ಚುಮೀಪತಿ ಪುರಂದರವಿಠಲ ನೀನೆಂದು