ಕೀರ್ತನೆ - 1033     
 
ಕ್ಷೀರಸಾಗರದಲಿ ಹಾವಿನ ಹಾಸಿಗೆ ಓಜೆಯೊಳ್ ಒರಗಿಪ್ಪ ಎನ್ನೊಡೆಯ । ಹಾರಮುಕುಟ ಕುಂಡಲ ಪೀತಾಂಬರಧಾರಿಯಾಗಿಹ ಎನ್ನೊಡೆಯ । ನಾರದ ಗರುಡ ಗಂಧರ್ವರ ಗಾನದಿ ಓರಂತೆ ಸುಖಿಸು ಎನ್ನೊಡೆಯ | ಮಾರ ಚಾಮರಗಳ ಢಾಳಿಸುತಿರಲು | ಮಾರುತಿ ಕಂಬಿವಿಡಿದು ನಿಲ್ಲಲು | ನೀರ ಜಾಲಿಯ ತಾನಡಿಗಳನೊತ್ತಲು ಉ- ದಾರ ದೇವರ ದೇವನೊಲುಮೆಯಿಂದ | ಕಾರುಣ್ಯ ಸುಧೆಯನು ಸುರಿಯೆ ಭಕ್ತರಮೇಲೆ ಭೂರಮಣನೆ ಪುರಂದರ ವಿಠಲರಾಯ