ಕೀರ್ತನೆ - 1023     
 
ಬದಿಯ ಬಲಿದು ಕಡಹದ ಮರನೇರಿ | ಕಾಲಿಯ ಮಡುವ ಧುಮುಕಿ ಅವನ ಶಿರದಲ್ಲಿ || ಧಿಮಿ ಧಿಮಿ ಧಿಮಕೆಂದು ಕುಣಿಯಲು | ದಂಧಣ ಧಣ ಎಂದು ಬೊಮ್ಮ ಮದ್ದಲೆ ಬಡಿಯೆ । ತಂದನ್ನ ತಾ ಎಂದು ಹನುಮಂತ ಪಾಡೆ | ನಂದಿ ವಾಹನ ತಾಳವ ಪಿಡಿದು ತತ್ಥೈ ಎನ್ನೆ ! ನಂದನಕಂದ ಆಡಿದ ಆನಂದವ । ಎಂದವಗೊಲಿವ ಪುರಂದರವಿಠಲ