ಕೀರ್ತನೆ - 1022     
 
ಮುಕುತವಿರಿಂಚಿ ವಿಹಂಗಪತಿಗಳ ಕೈಯ । ಉಕುತಿಗಳಿಂದಲಿ ನೀನು ನುತಿಸಿಕೊಂಬುವುದೆತ್ತ । ಆಕಳಕಾಯ್ದ ಗೋಪ ಗೊಲ್ಲತಿಯರ ಮಕ್ಕಳ ಕೈಯಿಂದ ನೀ ಬೈಸಿಕೊಂಬವುದೆತ್ತ । ಸಕಲ ಸುರರು ನಗರ ರಂಗಯ್ಯ ನಿನಗೆ? । ತಕ್ಕುದನೆ ಮಾಡೊ ಪುರಂದರವಿಠಲ