ಕೀರ್ತನೆ - 1021     
 
ಗಲಭೆ ಇದೇನೊ ಬೊಮ್ಮಾದಿಗಳ || ಉಲುಹು ಇದೇನೊ ರುದ್ರಾದಿಗಳ | ಸುಳಿಸದಿರೆಲೊ ಗರುಡಾದಿಗಳ | ನಿಲಹೇಳೊ ಇಂದ್ರ-ಚಂದ್ರಾದಿಗಳ | ಸುಳಿದರೆ ಹೊಯ್ಯೋ ಅಸುರಾದಿಗಳ | ತೊಲಗ ಹೇಳೆಲೊ ಸನಕಾದಿಗಳ | ನಳಿನಪತ್ರೇಕ್ಷಣನ ಓಲಗಶಾಲೆಗೆ | ಸಲುವರೆ ಲಿಂಗ ಶರೀರಿಗಳು? | ಕಾಲಕಾಲದಿ ಲಕ್ಷ್ಮಿಯವೆರಸಿ | ಸುಲಭನೊಪ್ಪಿದ ಪುರಂದರವಿಠಲ