ತ್ರಿಶೂಲ ಡವರುಗ ಭಸಿತ ರುದ್ರಾಕ್ಷಿ |
ಪಶುವಾಹನ ನಾಮದೊಂದು ಮೂರುತಿ |
ನೊಸಲೊಳು ಸಿರಿನಾಮ ಶಂಖ ಚಕ್ರ ಗದೆ ।
ಬಿಸಜವ ಪಿಡಿದಿಹದೊಂದು ಮೂರುತಿ |
ಕುಶಲದಿ ಜಪಮಣಿಮಾಲೆ ಚತುರ್ಮುಖ
ವಸುಧೆಯ ಸೃಜಿಸುವದೊಂದು ಮೂರುತಿ |
ಎಸೆವಂತ ಕೋಟೆ ವೇದವರ್ಣಿಸಲು ಸಂ
ತಸದಿ ನೋಡುತಿಹದೊಂದೆ ಮೂರುತಿ |
ಸಮ್ಮೋಹನವೆ ಏಕಮೇವ ಶ್ರುತಿಯೆಂಬ ।
ನಿರ್ಮಳವಾಗಿಹ ದೊಂದೆ ಮೂರುತಿ |
ಸುಮ್ಮನಸರಿಗೊಮ್ಮೆ ಸುಳುವು ತೋರುವ ಪರ |
ಬೊಮ್ಮನೆಂದು ಕರೆಸುವದೊಂದೆ ಮೂರುತಿ
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆಂತೆಂಬ |
ಹಮ್ಮಿಂದಲಾಡುತಿಹದೊಂದೆ ಮೂರುತಿ |
ಒಮ್ಮೊಮ್ಮೆನಾ ಕುರುಹು ಹಿಡೆವೆನೆಂದರೆ
ಅಮ್ಮದೆ ಪುರಂದರವಿಠಲನಾದೊಂದೆ ಮೂರುತಿ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ