ಅನಂತ ಕಿರೀಟ ಅನಂತಶಿರಸ ಅನಂತಕರಣ ಅನಂತ ಚಕ್ಷು
ಅನಂತ ನಾಶಿಕ ಅನಂತ ಜಿಹ್ವೆ ಅನಂತದಂತ ಅನಂತವದನ |
ಅನಂತ ಕಂಠ ಅನಂತ ಭುಜ ಅನಂತ ಹಸ್ತ
ಅನಂತ ಬೆರಳ ಅನಂತನಖಾದಿ |
ಅನಂತ ಶ್ರೀಗಂಧ ಶ್ರೀತುಲಸಿ ವೈಜಯಂತಿ
ಮಾಲೆಯಿಂದೊಪ್ಪುವ ।
ಅನಂತ ವಕ್ಷ ಅನಂತಕುಕ್ಷಿ ಅನಂತನಾಭಿ ।
ಅನಂತ ಕಟಿ ಅನಂತ ಜಾನು ಜಂಘ ಅನಂತ ಚರಣ |
ಅನಂತ ಪೆಂಡೆಯ ಅನಂತ ಜಗಂಗಳ ಒಳಗು ಹೊರಗು |
ನಮ್ಮ ಪುರಂದರವಿಠಲನೆ ಅನಂತ