ಕೀರ್ತನೆ - 1009     
 
ಬೊಮ್ಮಗೆ ಸಿರಿರಂಗ ಮೂರುತಿ | ರುದ್ರಂಗೆ ನರಸಿಂಹ ಮೂರುತಿ । ಇಂದ್ರಂಗೆ ಉಪೇಂದ್ರ ಮೂರುತಿ | ಚಂದ್ರಗೆ ದಧಿವಾಮನ ಮೂರುತಿ । ಸೂರ್ಯಗೆ ನಾರಾಯಣ ಮೂರುತಿ | ಅಗ್ನಿಗೆ ಪರಶುರಾಮ ಮೂರುತಿ | ಈರೇಳು ಲೋಕಕ್ಕೆಲ್ಲ ಕಾಲ ಪುರುಷ ವಿಷ್ಣು ಮೂರುತಿ | ಎನಗೆಂದೂ ಸಿರಿ ಬೊಮ್ಮ ಪರಿಪೂರ್ಣ ಪುರಂದರವಿಠಲನೆ ಮೂರುತಿ