ಕೀರ್ತನೆ - 1006     
 
ಸುಮ್ಮನಾದರೂ ಒಮ್ಮೆ ಸುಳಿವ ತೋರತ ಬ್ರಹ್ಮಾಂಡದೊಳಾಡುತಿಹುದೊಂದೇ ಮೂರುತಿ । ನಮ್ಮ ದೇವ ನಿಮ್ಮ ದೇವ ತಮ್ಮ ದೇವ ಎಂತೆಂಬ ಹಮ್ಮಿಂದಲಾಡುತಿಹುದೊಂದೇ ಮೂರುತಿ । ಒಮ್ಮೊಮ್ಮೆ ನಾ ಕುರಹ ಹಿಡಿವೆನೆಂದರೆ ಅಮ್ಮದೆ ಪುರಂದರವಿಠಲನಾದದ್ದೊಂದೆ ಮೂರುತಿ