ಕೀರ್ತನೆ - 1002     
 
ಅಗ್ನಿಯೊಳಗಿದ್ದು ದಾಹಕ ಶಕುತಿಯನೀವೆ । ವಾಯುವಿನಲ್ಲಿದ್ದು ಶೋಷಕ ಶಕುತಿಯ ನೀವೆ । ವರುಣನಲ್ಲಿದ್ದು ಕ್ಲೇದಕ ಶಕುತಿಯನೀವೆ | ನಾನಾವಸ್ತುವಿನಲ್ಲಿದ್ದು ಇಂತು ನಾನಾ ಶಕುತಿಯನೀವೆ । ಆರು ನಿನ್ನಂತೆ ಘನಮಹಿಮರೊ ನೀನೆ ಘನ-ಪುರಂದರವಿಠಲ