ಕೀರ್ತನೆ - 987     
 
ವಿಶ್ವನೆನಿಸಿ ವಿಶ್ವಜಾಗರವ ಪ್ರೇರಿಸುವೆ ದೇವ । ತೈಜಸನೆನಿಸಿ ಲೋಕದ ಸ್ವಾಪನವ ಸೃಜಿಸುವೆ ದೇವ । ಪ್ರಾಜ್ಞನೆನಿಸಿ ಜನರಿಗೆ ಸುಬುದ್ಧಿಯನೀವೆ । ತುರೀಯನೆನಿಸಿ ಚೇತರಿಗೆ ಪರಗತಿಯ ನೀವೆ । ಆತುಮ ಅಂತರಾತುಮನೆನಿಸಿ ನೀನೆ ಶುಭಸಾರವ ಭೋಗಿಪೆ ದೇವ ॥ ಅನಿರುದ್ಧನೆನಿಸಿ ಲೋಕವನಾದಿಯಲೆ ಸೃಜಿಸುವೆ ದೇವ | ಪ್ರದ್ಯಾಮ್ನ ನೆನಿಸಿ ಲೋಕವನವರತ ಪಾಲಿಸುವೆ ದೇವ | ಸಂಕರುಷಣನೆನಿಸಿ ಲೋಕವ ನಿನ್ನೊಳಗಿಡುವೆ । ವಾಸುದೇವನೆನಿಸೆ ಕೈವಲ್ಯವ ನೀವೆ । ಸರ್ವವ್ಯಾಪಾರಕೆ ಕಾರಣ ನೀನೆಯಲಾ ಪುರಂದರವಿಠಲ ವಿಭುವೆ ದೇವ