ಕೀರ್ತನೆ - 979     
 
ಸ್ಥಿರದಿ ಅಜ-ಭವಾದಿಗಳು ನಾರಾಯಣನ ಗುಣಗಳನೆಲ್ಲ | ಅರಿಯಲಾರರು ಮಿಕ್ಕ ಸುರರಿನ್ನು ಬಲ್ಲರೇನು | ಸರಸಿಜಾಕ್ಷಿ ಇಂದಿರಾದೇವಿ ತನ್ನ ಪತಿಯ ಪಾದಕಮಲ | ಕಿರುಬೆರಳ ನಖತುದಿಯ ನೋಡಲಳವಲ್ಲದಂಥ | ನರಹರಿಗೆ ಶರಣು ಶರಣೆನ್ನಿ