ಕೀರ್ತನೆ - 973     
 
ಅಚ್ಯುತ ಸುಳಿದೆ ಎನ್ನ ಕಣಣ ಮುಂದೆ ಯವ್ವ | ಕಸ್ತೂರಿ ಮೃಗದಂತೆ ಘಮ ಘಮಿಸುತ್ತ । ಅನಂತ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ | ಮೇರೆದಪ್ಪುತ ಏನೆಂಬೆ ಎನ್ನಪ್ಪುತ | ಗೋವಿಂದ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ | ನಗುತ ನೋಡುತ ನುಡಿಯುತ ಎನ್ನಪ್ಪುತ । ಮಾಧವ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ | ಮನ್ಮಥಕೋಟಿ ಲಾವಣ್ಯನಂತೆ ಮೆರೆವ | ಗೋಪಾಲ ಸುಳಿದ ಎನ್ನಕಣ್ಣಮುಂದೆ ಯವ್ವಾ | ದಿನಕರಕೋಟಿ ತೇಜನಂತೆ ಹೊಳೆಯುತ | ಎನ್ನ ಮನದುತ್ಸಾಹ ಸೂರೆಗೊಂಡನವ್ವ | ಉಮ್ಮತ್ತೂರ ಅಜನಯ್ಯ ಪುರಂದರವಿಠಲ