ಕೀರ್ತನೆ - 963     
 
ಪಾಂಡುತನಯನಂತೆ ಕರೆ ಕರೆದು ನಿನ್ನ | ಅಟ್ಟುಮಣಿ ಅಡಿಮಣಿ ಇಕ್ಕಬೇಕು | ಅರ್ಜುನನಂತೆ ಬಂಡಿಯ ಬೋವನ ಮಾಡಿ । ಕುದುರೆಗಳ ವಾಘಿಸಬೇಕು | ಅಂಬು ತಾ ಬಿಲ್ಲು ತಾ ಎನ್ನಲು ಬೇಕು | ನಾ ನಿನ್ನ ಪೂಜಿಸಿ ಪೂಜಿಸಿ | ಮೋಸ ಹೋದೆನಯ್ಯ ಪುರಂದರವಿಠಲ