ಕೀರ್ತನೆ - 956     
 
ಬದರಿಕಾಶ್ರಮದಿಂದ ಬಾದರಾಯಣ ಬಂದ । ಕಿಂ ಪುರುಷಖಂಡದಿಂದ ಹನುಮನೊಡೆಯ ರಾಮ | ಚಂದ್ರ ಬಂದ ಕ್ಷೀರವಾರಿಧಿಯಿಂದ ಶ್ರೀಮಂತ ಪುರಂದರ ವಿಠಲರಾಯ ಬಂದ