ಕೀರ್ತನೆ - 948     
 
ವರಗಿರಿಯಿಂದ ತಿಮ್ಮಯ್ಯ ಬಂದ । ಸಿಂಹಗಿರಿಯಿಂದ ನರಸಿಂಹ ಬಂದ | ಹಸ್ತಿಗಿರಿಯಿಂದ ವರದರಾಜನು ಬಂದ | ಯದುಗಿರಿಯಿಂದ ನಾರಾಯಣ ಬಂದ 1 ಕಾವೇರಿಯಿಂದ ರಂಗನಾಥನು ಬಂದ । ಪುರುಷೋತ್ತಮದಿಂದ ಜಗನ್ನಾಥ ಬಂದ । ಪಾಂಡುರಂಗದಿಂದ ಎನ್ನ ಮನ್ನಿಸಿ । ಮನೆಗೆ ಪುರಂದರ ವಿಠಲರಾಯ ಬಂದ