ಕೀರ್ತನೆ - 947     
 
ಧ್ವಜವಜ್ರಾಂಕಶ ರೇಖಾಂಕಿತವಾದ ಹರಿಯ ಪದ್ಮಾಂಜುವ (ಸೇವಿಪ) ಸೇವಿಸುವ ಅಜಭವಾದಿಗಳ (ಭಾಗವತರ) ಭಾಗ್ಯವ (ನೋಡೋ) ನೋಡು ತ್ರಿಜಗವಂದ್ಯನ ಪಾಡು ಭಕುತಿಯನು ಬೇಡು (ಸುಜನಸಂಗಮಮಾಡು) ಕುಜನಮತವ ಸುಡು ಭಕುತಿಯನು ಬೇಡು (ಸುಜನಸಂಗಮಮಾಡು) ದುರ್ಜನರ ಸಂಗವ ಬಿಡು ಗಜೇಂದ್ರನ ಕಾಯ್ದ ಶ್ರೀಕೃಷ್ಣನ ಧ್ಯಾನವ (ಸ್ಮರಣೆ) ಮಾಡು । ಪುರಂದರವಿಠಲ(ರಾಯನ) ಬಿಡದೆ ಕೊಂಡಾಡು.