ಕೀರ್ತನೆ - 946     
 
ಧನದಾಸೆ ದೈನ್ಯಪಡಿಸುತಿದೆ ವನಿತೆಯರ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಗಳ ನೆನೆವಂತೆ ಮಾಡೊ ಪುರಂದರವಿಠಲ.