ಕೀರ್ತನೆ - 945     
 
ಚೋರಗೆ ಚಂದ್ರೋದಯ ಸೊಗಸುವುದೆ? ಜಾರಗೆ ಸೂರ್ಯೋದಯ ಸೊಗಸುವುದೆ? ಶ್ರೀರಮಣನ ಕಥೆ (ಯುಹೀನಗೆ) ಮೆಚ್ಚುವುದೆ? ನಾರಿಯ ನಯನವಿಲ್ಲದ ಚೆಲುವಿಕೆಯು ಶಾರೀರವಿಲ್ಲದವನ ಹಾಡಿಕೆಯು ಅರಣ್ಯರೋದನ(ವೋ)ವಯ್ಯ ಪುರಂದರವಿಠಲ.