ಕೀರ್ತನೆ - 943     
 
ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ಕಾಳಿದ್ದಷ್ಟೋತ್ತಾಗಲಿ ದೇವ ನಿನ್ನ ನೆನೆದವ ಜೀವನ್ಮುಕ್ತನಲ್ಲವೇನೋ ಸರ್ವಕಾಲದಲಿ ನರಳುತ್ತ ಹೊರಳುತ್ತ ವರಲುತ್ತ ಶ್ರೀಹರಿ ಹರಿ ಯೆಂದವರು ಜೀವನ್ಮುಕ್ತನೆಂಬದಕ್ಕೆ ಏನು ಆಶ್ಚರ್ಯವಯ್ಯ ಶ್ರೀ ಪುರಂದರವಿಠಲರೇಯ.