ಕೀರ್ತನೆ - 942     
 
ಆವಿನ ಕೊಂಬಿನ ತುದಿಯಲಿ ಸಾಸಿವೆ ನಿಂತಷ್ಟು ಹೊತ್ತಾದರಾಗಲಿ ದೇವ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ? ಸರ್ವಕಾಲದಲ್ಲೂ ಒರಲುತ್ತ ನರಳುತ್ತ ಹರಿ ಹರಿ ಎಂದವ ಜೀವನ್ಮುಕ್ತನೆಂಬುದು ಏನು ಆಶ್ಚರ್ಯವಯ್ಯ ಪುರಂದರವಿಠಲ.