ಕೀರ್ತನೆ - 941     
 
ಹಿಂಸಕರ ಸಂಗದಿಂದ ಬಂದ ಪಾತಕಕ್ಕೆ ಕಂಸಮರ್ದನನೆಂದರೆ ಸಾಲದೆ? ಜಾರರ ಸಂಗದಿಂದ ಬಂದ ಪಾತಕಕ್ಕೆ ಗೋಪೀಜನ ಜಾರನೆಂದರೆ ಸಾಲದೆ? ಚೋರರ ಸಂಗದಿಂದ ಬಂದ ಪಾತಕಕ್ಕೆ ನವನೀತಚೋರನೆಂದರೆ ಸಾಲದೆ? ಜಾರ ಚೋರನಾದ ಅಜಮಿಳನನ್ನು ವೈಕುಂಠಕ್ಕೇರಿಸಿದ ಪುರಂದರವಿಠಲಗೆ ನಮೊ ನಮೊ.