ಕೀರ್ತನೆ - 939     
 
ಬೆಟ್ಟದಂಥ ಸುತ್ತಮುತ್ತಲೊಟ್ಟಿರೆ ಕೃಷ್ಣ ನಾಮದ ಕಿಡಿಬಿದ್ದು ಬೆಂದುಹೋದದ್ದು ಕಂಡೆ ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಶಿಕ್ಷಿಸದೆ ಬಿಡ ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು ಪುಂಡರೀಕಾಕ್ಷ ನಮ್ಮ ಪುರಂದರವಿಠಲ.