ಬೆಟ್ಟದಂಥ ದುರತವು ಸುತ್ತಮುತ್ತು ಇರಲಾಗೆ
ಕೃಷ್ಣ ನಾಮದ ಕಿಡಿಬಿದ್ದು ದುರಿತ ಬೇವುದ ಕಂಡೆ
ಎಲೆ ಎಲೆ ದುರಿತವೆ, ನಿಲ್ಲ-ನಿಲ್ಲದೆ ಹೋಗು
ಎಲೆ ಎಲೆ ದುರಿತವೆ, ತಿರುಗಿ ನೋಡದೆ ಹೋಗು ।
ಎಲೆ ಎಲೆ ದುರಿತವೆ, ಮರಳಿ ನೋಡದೆ ಹೋಗು
ಎನ್ನೊಡೆಯ ಪಂಢರಿರಾಯ ಪುರಂದರ ವಿಠಲ ಕಂಡರೆ
ಶಿರವ ಚೆಂಡಾಡುವನು-ತಿರುಗಿ ನೋಡದೆ ಹೋಗು.