ಕೀರ್ತನೆ - 935     
 
ಮನೆಯಾಕೆ ಮನ್ನಣೆಗೆಡೆಸುತಲಿದೆಯೆನ್ನ- ಮನೆ ಮನೆವಾರತೆಯಾಶೆ ಬಲು ಬಾಧಿಸುತಿದೆ | ಧನದಾಶೆ ದೈನ್ಯ ಬಡಿಸುತಿದೆ | ವನಿತೆಯರಾಶೆ ಒಡಲ ಸುಡುತಿದೆ | ಇನಿತಾಶೆಯ ಬಿಡಿಸು ಬುದ್ಧಯಲಿ ನಿನ್ನ | ನೆನೆವಂತೆ ಮಾಡೆನ್ನ ಪುರಂದರವಿಠಲ