ಕೀರ್ತನೆ - 932     
 
ಅಕಿಂಚನಗೆ ಅನರ್ಥ್ಯವಾದಂತೆ | ಅರತಂಗೆ ಆರತವಾದಂತೆ | ಅಂಧಕಂಗೆ ಅಕ್ಷಿಯಾದಂತೆ । ಅರವಿಂದಕಾದಿತ್ಯನಾದಂತೆ । ಅಳಿಗೆ ಅಮರಾಂತ್ರಿಪವಾದಂತೆ | (ಆ) ಅಪುಣ್ಯಕ್ಕೆ ಅಮೃತವಾದಂತೆ । ಅಯ್ಯ ಅಕಿಂಚನಗೆ ಅನರ್ಥ್ಯವಾದಂತೆ | ಅಪಾರ ಸಂಸಾರ ಭಯಭೇದ | ಅನೇಕದ ಅದಿಪತಿಯಾದ । ಪುರಂದರವಿಠಲರಾಯ | ಎನಗೆ ನಿನ್ನ ಸಿರಿ ನಾಮ ದೊರಕಿಸು ದೇವಾ