ಕೀರ್ತನೆ - 928     
 
ಒಂದು ಕಾಲದಲ್ಲಿ ಆನೆ ಕುದರೆ (ಮೇಲ್ಕೆರೆಸುವೆ) ಏರಿಸುವೆ ಒಂದು ಕಾಲದಲ್ಲಿ ಬರಿಗಾಲಿಂದ ನೆಡೆಸುವೆ ಒಂದು ಕಾಲದಲ್ಲಿ ಅಮೃತಾನ್ನವನುಣಿಸುವೆ ಒಂದು ಕಾಲದಲ್ಲಿ ಉಪವಾಸವಿರಿಸುವೆ ನಿನ್ನಳವ ನೀನೇ ಬಲ್ಲೆ ನಾನೇನ ಬಲ್ಲೆನಯ್ಯ ಪನ್ನಗಶಯನ ಶ್ರೀಪುರಂದರವಿಠಲ.