ಕೀರ್ತನೆ - 927     
 
ರಾವಣನು ರಥವೇರಿ ರಣಕೆ ಬಂದಿರಲಾಗಿ ನೀವು ಪಾದಾಚಾರಿಯಾಗಿ ಭೂಮಿಯಲ್ಲಿರಲು ನಮ್ಮ ಹನುಮಂತನು ನಿಮ್ಮನು ಕಂಡು ಚಾಲ್ವರಿದು ಬೊಬ್ಬಿರಿದು ಕುಣಿಕುಣಿದಾಡಿ ಸುಖ(ವ) ಸೂರೆ(ಯ) ಮಾಡಿ ಎತ್ತಿರಲು ನಮ್ಮ ಹಿರಿಯ ನಿಮ್ಮ ವೇಳೆಗೊದಗಿರಲಾಗಿ ನಮ್ಮ ನೀ (ಮರೆಯುವದೆ) ಮರೆಯಲಾಗದು ಪುರಂದರವಿಠಲ