ಹರಿಶರಣು ಎನ್ನ ಮನೆಗೆ ಬಂದರೆ
ಮನೆ ಪಾವನವಪ್ಪದು
ಹರಿಶರಣರ ಎನ್ನ ಕೂಡೆ ಮಾತನಾಡಿದರೆ
ತನು ಪಾಪ ಹೋಹುದು
ಮನೆಯೊಳುಂಡರೆ ಎನ್ನ
ಇಪ್ಪತ್ತೊಂದು ಕುಲ ಪಾವನವಪ್ಪುದು
ಹರಿಶರಣರೆನಗೆ ಗತಿ ಹರಿಶರಣರೆನಗೆ ದೆಸೆ
ಎನ್ನ ಗದುಗಿನ ವೀರನಾರಾಯಣ ಪುರಂದರವಿಠಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ