ಕೀರ್ತನೆ - 925     
 
ಒಡಯನುಳ್ಳ ತೊತ್ತಿಗೇತರ ಚಿಂತೆ ಎನ್ನೊಡೆಯ ದ್ವಾರಕಿನಿವಾಸ ಎಂಬ ಛತ್ರವಿರೆ ಇಂದಿಗೆಂಬ ಚಿಂತೆ ನಾಳೆಗೆಂಬ ಚಿಂತೆ ನಾಡಿದಿಗೆಂಬ ಚಿಂತೆ ತೊತ್ತಿಗೇತಕಯ್ಯ? ಅಡಿಅಡಿಗೆ ಎಮ್ಮನೋವ ಕಾವ ಚಿಂತೆಯ ಒಡೆಯ ಪುರಂದರವಿಠಲ ನೀನಿರುತಿರೆ.