ಕೀರ್ತನೆ - 923     
 
ಮರವಿದ್ದರೆ ಫಲವೇನು ನೆರಳಿಲ್ಲದನಕ ಒರತೆ ಇದ್ದರೆ ಫಲವೇನು ಜಲವಿಲ್ಲದನಕ ಧನವಿದ್ದರೆ ಫಲವೇನು ಮನವಿಲ್ಲದನಕ ಏನು ಇದ್ದೊಡೇನು ಜ್ಞಾನವಿಲ್ಲದನಕ ತನುವಿದ್ದರೆ ಫಲವೇನು ಪುರಂದರವಿಠಲನ ಊಳಿಗಮಾಡದನಕ.