ಕೀರ್ತನೆ - 921     
 
ಕೋಳಿಗೆ ಹೊನ್ನ ಪಂಜರವು ಇನ್ನೇಕೆ ಜೋಳಿಗೆ ಜಾಳಿಗೆದಂಡೆ ಇನ್ನೇಕೆ ಮಾಳಿಗೆಯ ಮನೆಯಿನ್ನು ಡೊಂಬಗೇಕೆ ಆಳು ಇಲ್ಲದೆ ಅರಸುತನವೇಕೆ ನಮ್ಮ ಪುರಂದರವಿಠಲನ ಊಳಿಗಕ್ಕಾಗದವನ ಬಾಳುವೆ ಇನ್ನೇಕೆ?