ಒಡೆಯ ಹಾವುಗೆ ಮೆಟ್ಟ ಹಾವುಗೆಯವ ನಾನು |
ಒಡೆಯ ಮೆಲ್ಲಡಿಯಿಡಲು ಕಟ್ಟಿಗೆಯವ ನಾನು ।
ಒಡೆಯ ತಾಂಬೂಲವ ಉಗುಳುವ ವೇಳೆಯಲಿ |
ಪಡಿಗ-ಕಾಳಂಜಿಯ ಪಿಡಿವವ ನಾನು |
ಒಡೆಯನೊಡೋಗಲಗದಿ ಚಿತ್ತೈಸಿರೆ |
ಪಿಡಿವವ ಛತ್ರ ಛಾಮರವ ಕನ್ನಡಿಯ-ನಾನು
ಒಡೆಯ ಪುರಂದರವಿಠಲರಾಯನ |
ಉಗುರು ಬಿದ್ದಲ್ಲಿ ಎನ್ನ ಶಿರವ ಕೊಡುವೆ ನಾನು
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ