ಕೀರ್ತನೆ - 901     
 
ಭಕುತರಿಗಾಗಿ ನಡೆವೆ ನುಡಿವೆ ನೀನು । ಭಕುತರಿಗಾಗಿ ಕೊಡುವೆ ಕೊಳ್ಳುವೆ ನೀನು | ಭಕುತರಿಗಾಗಿ ಬರುವೆ ಹೋಗುವೆ ನೀನು | ಭಕುತರ ಪ್ರಭು ನೀನು ಭಕುತರಧೀನ ನೀನು | ಭಕುತವತ್ಸಲ ನಮ್ಮ ಪುರಂದರವಿಠಲ