ಕೀರ್ತನೆ - 898     
 
ಭಕುತರೆಂದರ ನಿನ್ನ ತೇಯುತಿಹೆಯಯ್ಯ । ಭಕುತರೆಂದರೆ ಅರಗಿನಂತೆ (ಕರಗಿ) ಕರುಗುತಿಹೆಯಯ್ಯ | ಭಕುತರಿಚ್ಛೆಯ ನೀನು ನೆಡೆಸುತಿಹೆಯಯ್ಯ । ಭಕುತರವಸರಕೆ ಒದಗುವೆಯಯ್ಯ । ಭಕುತವತ್ಸಲ ನಮ್ಮ ಪುರಂದರವಿಠಲ । ಭಕುತರಿಚ್ಛೆಯ ನೀನು ನೆಡೆಸುತಹೆಯಯ್ಯ