ಕೀರ್ತನೆ - 896     
 
ಬೊಮ್ಮನ ಪಡೆದೆ ಬೊಮ್ಮನ ಪದದಲ್ಲಿ ನಿಲಿಸಿದೆ | ರುದ್ರನ ಪಡೆದೆ, ರುದ್ರನ ಪದದಲಿ ನಿಲಿಸಿದೆ | ಇಂದ್ರನ ಪಡೆದೆ. ಇಂದ್ರನ ಪದದಲಿ ನಿಲಿಸಿದೆ | ಚಂದ್ರನ ಪಡೆದೆ, ಚಂದ್ರನ ಪದದಲಿ ನಿಲಿಸಿದೆ | ಎಲ್ಲ ದೇವರ್ಕಳ ಪಡೆದೆ, ಎಲ್ಲದೇವರ್ಕಳ ಪಥದಲಿ ನಿಲಿಸಿದೆ | ಭಕುತರುಂಡದ್ದೆ ಉಂಬುದು । ಭಕುತರುಟ್ಟದ್ದೆ ಉಟ್ಟುದು । ಭಕುತರೊಡೆಯ ನೀನು ಭಕುತರಧೀನ ನೀನು | ಭಕುತವತ್ಸಲ ನಮ್ಮ ಪುರಂದರವಿಠಲ । ಭಕುತರೊಡೆಯ ನೀನು, ಭಕುತ ವತ್ಸಲ ನೀನು