ಅವರು ನಡೆದದ್ದೆ ರಾಜಪಥ ನಾರಾಯಣ ।
ಅವರು ನುಡಿದದ್ದೆ ವೇದಾರ್ಥ ನಾರಾಯಣ |
ಅವರು ಮಾಡಿದ್ದೆ ಮರ್ಯಾದೆ ನಾರಾಯಣ |
ಅವರು ನಿಂತಿದ್ದೆ ಕ್ಷೇತ್ರವೈ ನಾರಾಯಣ |
ಅವರು ಮಿಂದದ್ದೆ ಸುರಗಂಗೆ ನಾರಾಯಣ |
ಅವರು ರಾಜಾಧಿರಾಜರು ಅವರೆ ಕಾಣಿರೋ |
ಅವರು ರಾಜಪರಮೇಶ್ವರರು ಅವರೆ ಕಾಣಿರೋ ।
ಅವರ ದಾಸ ಜಗದೇಕನಾಥ ।
ಅವರು ನಮ್ಮ ಪುರಂದರ ವಿಠಲನ ಆಳುಗಳು ಕಾಣಿರೊ