ಕೀರ್ತನೆ - 879     
 
ಹರಿಯಲ್ಲಿ ಭಕ್ತಿಯ ಗೆಳೆತನವಿಟ್ಟಾ | ತರುಣಿ ಸಂಪದ ಪ್ರಜೆಗಳನೆಲ್ಲ ಬಿಟ್ಟಾ ಕರುಮತ್ರಯಂಗಳನಿವಹದಿ ಕೆಟ್ಟಾ । ತಿರುಗಿ ಬರುವ ಉರುಬಟ್ಟೆಯ ಮೆಟ್ಟಾ । ಪುರಂದರವಿಠಲನಲಿ ಚಿತ್ತವಿಟ್ಟಾ | ನರಸಿಂಹನೊಲಿಸಿ ಲಿಂಗಾಂಗವ ಸುಟ್ಟಾ