ಕೀರ್ತನೆ - 877     
 
ಹರಿಮೂರ್ತಿಗಾಷ್ಟಂಗ ಪೊಡಮಟ್ಟು ನಿಚ್ಚ ಉರುಪಾಪಾಟವಿಗೆ ಗಮ್ಮನೆ ಇಟ್ಟ ಕಿಚ್ಚ ಸುರಲೋಕ ಮುಂತಾದ ಸಿರಿಗವ ಮೆಚ್ಚ ನರರ ಸಂಪದವೆಲ್ಲ ಸ್ಥಿರವೆಂದು ನೆಚ್ಚ ಪುರಂದರ ವಿಠಲನಂಘ್ರಿಯ ನಂಬಿದ ಹುಚ್ಚ ನಿರಯದರಸನಿಗೆ ಬೆದರನು ಬೆಚ್ಚ