ಕೀರ್ತನೆ - 874     
 
ಹರಿಯ ಸ್ಮರಣೆಗೆ ವಿಸ್ಮೃತಿಯನಾವ ಜರೆದ | ಚಿರಕಾಲದಘವನೊಮ್ಮಿಂದೊಮ್ಮೆ ತರೆ(ರಿ)ದ । ಪರಮಭಾಗವತರ ಸಮ್ಮೇಳ(ನದಿ)ವನು ಬೆರೆದ । ನೆರೆಹೊರೆಗೆ ಎಲ್ಲ ಮುಕುತಿಯನು ಕರೆದ | ವರಬಿಂಬಕಾಂಬ ಕಂಗಳನು ತೆರೆದ ಪುರಂದರ ವಿಠಲರಾಯನ ಹೊಂದಿ ಬೆರೆದ